please click here
Friday, May 3, 2013
ದೇಶದ ಪ್ರಗತಿಗಾಗಿ ಮತದಾನದಲ್ಲಿ ಪಾಲ್ಗೊಳ್ಳಿ; ಯುವಜನತೆಗೆ ಜಿಲ್ಲಾಧಿಕಾರಿ ಕರೆ
ಮಂಗಳೂರು,ಮೇ.03:- ದೇಶದ ಎಲ್ಲಾ ಯುವಜನತಯೆ ಮತದಾನದಲ್ಲಿ ಖಡ್ಡಾಯವಾಗಿ ಭಾಗವಹಿಸಿ ಸೂಕ್ತ
ವ್ಯಕ್ತಿಯನ್ನು ಚುನಾಯಿಸಿದಲ್ಲಿ ದೇಶದ ಪ್ರಗತಿ ಯ ದಕ್ಕೇ ಬದಲಾಗಲಿದೆ, ಆದ್ದರಿಂದ
ಎಲ್ಲಾ ಯುವಪೀಳಿಗೆ ಮತದಾನದಲ್ಲಿ ಭಾಗವಹಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ
ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಹರ್ಷಗುಪ್ತ ಅವರು ಯುವಜನತೆಗೆ ಕರೆನೀಡಿದ್ದಾರೆ.
ಅವರು ಗುರುವಾರ ಸಂಜೆ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ನೆಹರು ಯುವಕೇಂದ್ರ, ಮಂಗಳೂರು, ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯತ್, ಮಂಗಳೂರು, ಲಯನ್ಸ ಕ್ಲಬ್,ಮಂಗಳೂರು ಹಾಗೂ ಅಸೊಸಿಯೇಷನ್ ಆಫ್ ಕನ್ಸಟ್ರಕ್ಷನ್ ಇಂಜಿನಿಯರ್ಸ್(ಇಂ)ಮಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮತದಾರರ ಜಾಗೃತಿ ಕಾರ್ಯಕ್ರಮದ ಅಂಗವಾಗಿ ನಡೆದ ಕ್ಯಾಂಡಲ್ ಶೋ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಇಂದು ಸ್ವೀಪ್ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಷ್ಟೋಂದು ಅರ್ಥಪೂರ್ಣವಾಗಿ ಜರುಗುತ್ತಿರುವುದು ತುಂಬಾ ಶ್ಲಾಘನೀಯವಾಗಿದೆ ಎಂದು ಪ್ರಶಂಸಿಸಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ದ.ಕ.ಜಿಲ್ಲಾಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ|ಕೆ.ಎನ್.ವಿಜಯಪ್ರಕಾಶ್ ಅವರು ಮಾತನಾಡಿ ಮತದಾರರ ಜಾಗೃತಿ ಕಾರ್ಯಕ್ರಮ ಒಂದುದಿನದ ಕಾರ್ಯಕ್ರಮವಲ್ಲ ಬದಲಾಗಿ ನಿರಂತರವಾಗಿ ವರ್ಷಪೂರ್ತಿ ನಡೆಯುತ್ತಿರಬೇಕು ಅದಕ್ಕಾಗಿಯೇ ಭಾರತದ ಭೂಪಟದ ಸುತ್ತಲೂ 365 ನಂದಾದೀಪಗಳನ್ನು ಹಚ್ಚಲಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಮಂಗಳೂರು ಮಹಾನಗರಪಾಲಿಕೆ ಆಯುಕ್ತರಾದ ಡಾ|ಹರೀಶ್ ಕುಮಾರ್ ಮುಂತಾದವರು ಹಾಜರಿದ್ದರು.

Thursday, May 2, 2013
ಸ್ವಯಂಪ್ರೇರಿತರಾಗಿ ಮತದಾನ ಮಾಡಿ: ಸಿಇಓ
ಮಂಗಳೂರು, ಮೇ.02 :ಮತದಾನ ನಮ್ಮ ಹಕ್ಕು ಹಾಗೂ ಕರ್ತವ್ಯ; ತಪ್ಪದೆ ಮತದಾನ ಮಾಡಿ ಎಂದು
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಹೇಳಿದರು.
ಅವರು ಬುಧವಾರ ಸಂಜೆ ನಗರದ ಬಂದರು ಮೀನುಗಾರಿಕಾ ದಕ್ಕೆಯಲ್ಲಿ ಮೀನುಗಾರರನ್ನು ಗಮನದಲ್ಲಿರಿಸಿ ಆಯೋಜಿಸಲಾದ ಮತದಾರರ ಜಾಗೃತಿ ಮತ್ತು ಶಿಕ್ಷಣ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ನೂರಾರು ಮೀನುಗಾರ ಬಂಧುಗಳು ಹಾಗೂ ಅವರ ಕುಟುಂಬದವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮತದಾನ ಮಾಡುವ ಬಗ್ಗೆ ಹಾಗೂ ಇತರರಿಗೆ ಮತದಾನ ಮಾಡುವಂತೆ ಮನವೊಲಿಸುವ ಪ್ರಮಾಣವಚನ ಬೋಧಿಸಲಾಯಿತು. ನಿನ್ನೆಯಿಂದ ಐದು ದಿನಗಳ ಕಾಲ 'ವೋಟ್ ಮಿ' ಎಂಬ ಸಂದೇಶದೊಂದಿಗೆ ದೋಣಿ ಸಮುದ್ರದಲ್ಲಿ ಸಂಚರಿಸಲಿದೆ.
ಮೀನುಗಾರರ ಬದುಕೇ ಸವಾಲುಗಳಿಂದೊಡಗೂಡಿದ ಸಾಹಸದ ಬದುಕು. ಮೀನುಗಾರರೆಲ್ಲರೂ ನೈತಿಕ ಮತದಾನಕ್ಕೆ ಆದ್ಯತೆ ನೀಡಿ ಮೇ ಐದರಂದು ನಡೆಯಲಿರುವ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಿ ಎಂಬ ಸಂದೇಶ ನೀಡಿದರು.
ಸಭೆಯಲ್ಲಿ ಯತೀಶ್ ಬೈಕಂಪಾಡಿ, ಹರೀಶ್ಚಂದ್ರ ಪುತ್ರನ್, ಅಬ್ದುಲ್ ರೆಹಮಾನ್,ಯೂತ್ ಕ್ಲಬ್ ನ ಚೇತನ್ ಬೆಂಗ್ರೆ, ಮೀನುಗಾರಿಕಾ ಇಲಾಖೆ ಉಪನಿರ್ದೇಶಕರಾದ ಸುರೇಶ್ ಕುಮಾರ್, ಸಹಾಯಕ ನಿರ್ದೇಶಕರಾದ ಪಾಶ್ರ್ವನಾಥ್ ಮುಂತಾದವರು ಭಾಗವಹಿಸಿದ್ದರು.

Wednesday, May 1, 2013
ಚುನಾವಣಾ ಸಂಬಂಧಿ ಮಾಹಿತಿಗೆ dk.nic.inವೆಬ್ ಸೈಟ್ ವೀಕ್ಷಿಸಿ
ಮಂಗಳೂರು, ಮೇ.1 : ಜಿಲ್ಲೆಯಲ್ಲಿ ನ್ಯಾಯ ಸಮ್ಮತ ಹಾಗೂ ಮುಕ್ತ ಚುನಾವಣೆಗೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕೈಗೊಂಡ ಕ್ರಮಗಳನ್ನು ಎಲ್ಲರೂ ವೀಕ್ಷಿಸಲು ಅನುಕೂಲವಾಗುವಂತೆ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ dk.nic.in ವೆಬ್ ಸೈಟ್ ರೂಪಿಸಲಾಗಿದೆ.
ಇದುವರೆಗೆ ಜಿಲ್ಲಾಡಳಿತದಿಂದ ಸಭೆ ಸಮಾರಂಭಗಳಿಗೆ ನೀಡಿದ ಅನುಮತಿ, ವಾಹನಗಳಿಗೆ ನೀಡಿದ ಅನುಮತಿ ಹಾಗೂ ಮಾಧ್ಯಮಗಳಿಗೆ ನೀಡಿದ ಅನುಮತಿ ಹಾಗೂ ಅಭ್ಯರ್ಥಿಗಳು ನೀಡಿರುವ ಖರ್ಚು ವೆಚ್ಚದ ಮಾಹಿತಿಯನ್ನು ಇಲ್ಲಿಂದ ಪಡೆಯಬಹುದಾಗಿದೆ.
ಎಲ್ಲ ಮಾಹಿತಿಗಳು ಎಲ್ಲರಿಗೂ ಲಭ್ಯವಾಗಬೇಕೆನ್ನುವ ಉದ್ದೇಶದಿಂದ ಜಿಲ್ಲಾ ಚುನಾವಣಾಧಿಕಾರಿಗಳು ರೂಪಿಸಿರುವ ಈ ವೆಬ್ ಸೈಟ್ ನಲ್ಲಿ ಸಮಗ್ರ ಮಾಹಿತಿಗಳಿವೆ. ಇದುವರೆಗೆ ಒಟ್ಟು 223 ವಾಹನಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು ಅನುಮತಿ ನೀಡಲಾಗಿದೆ. ಸಭೆ ಸಮಾರಂಭಗಳಿಗೆ ಹಾಗೂ ರ್ಯಾಲಿಗಳಿಗೆ ಒಟ್ಟು 402 ಅರ್ಜಿಗಳು ಬಂದಿದ್ದು, ಅನುಮತಿಸಲಾಗಿದೆ.
ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳಿಗೆ ಸಂಬಂಧಿಸಿದಂತೆ 210 ಅರ್ಜಿಗಳಿಗೆ ಅನುಮತಿ ನೀಡಲಾಗಿದೆ. ಪಾವತಿ ಸುದ್ದಿ ಮಾಹಿತಿಯು ಲಭ್ಯವಿದೆ. ಅಕೌಂಟ್ ರಿಜಿಸ್ಟರ್ ಆಫ್ ಕ್ಯಾಂಡಿಡೇಟ್ಸ್ನಡಿ ಕ್ಷೇತ್ರವಾರು ಪ್ರತೀ ಅಭ್ಯರ್ಥಿಗಳು ನೀಡಿದ ವಿವರ ಪಡೆಯಬಹುದೆಂದು ಜಿಲ್ಲಾ ಚುನಾವಣಾಧಿಕಾರಿ ಹರ್ಷಗುಪ್ತ ಅವರು ಹೇಳಿದ್ದಾರೆ.

ಮನೆ ಮನೆಗೆ ಬಿಎಲ್ ಓಗಳ ಮೂಲಕ ವೋಟರ್ ಸ್ಲಿಪ್ ವಿತರಣೆ: ಜಿಲ್ಲಾಧಿಕಾರಿ
ಮಂಗಳೂರು, ಮೇ.1 : ಮೇ 5 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆ 2013ರ ಚುನಾವಣೆಯಂದು ಅರ್ಹ ಮತದಾರರು ಮತದಾನ ಚಲಾಯಿಸಲು ಅನುಕೂಲವಾಗುವಂತೆ ಚುನಾವಣಾ ಆಯೋಗ ಮನೆ ಮನೆಗೆ ಬಿಎಲ್ ಓಗಳ ಮೂಲಕ ವೋಟರ್ ಸ್ಲಿಪ್ ವಿತರಿಸಲಿದ್ದು, ಈ ಸ್ಲಿಪ್ನ್ನು ಗುರುತಿನ ಚೀಟಿಯಾಗಿ ಬಳಸಲು ಚುನಾವಣಾ ಆಯೋಗ ಅನುಮತಿ ನೀಡಿದೆ. ಬಿಎಲ್ಓಗಳು ನೀಡುವ ವೋಟರ್ ಸ್ಲಿಪ್ ಮಾತ್ರ ಅಧಿಕೃತವಾಗಿದ್ದು, ರಾಜಕೀಯ ಪಕ್ಷಗಳು ವಿತರಿಸುವ ವೋಟರ್ ಸ್ಲಿಪ್ನ್ನು ಗುರುತಿನ ಚೀಟಿಯಾಗಿ ಬಳಸಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾ ಅಧಿಕಾರಿಯಾಗಿರುವ ಹರ್ಷಗುಪ್ತ ಅವರು ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ ಎಪ್ರಿಲ್ 30 ರಿಂದ ವೋಟರ್ ಸ್ಲಿಪ್ ನ್ನು ಮನೆ ಮನೆಗೆ ವಿತರಿಸಲು ಬಿಎಲ್ಓಗಳು ಆರಂಭಿಸಿದ್ದು, ಮೇ 3 ರೊಳಗೆ ಎಲ್ಲರ ಮನೆಗೂ ವೋಟರ್ ಸ್ಲಿಪ್ ತಲುಪಲಿದೆ. ವೋಟರ್ ಸ್ಲಿಪ್ ಸಿಗದಿದ್ದರೆ ಸಂಬಂಧಪಟ್ಟ ಬಿಎಲ್ಓಗಳನ್ನುಅರ್ಹಮತದಾರರು ತಕ್ಷಣವೇ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

Subscribe to:
Posts (Atom)