Tuesday, April 23, 2013

62 ಮಿಕ್ಸರ್ ಗ್ರ್ಯಂಡರ್ ವಶ

  ಮಂಗಳೂರು ಏಪ್ರಿಲ್ 23: ಮುಂಬಯಿ-ಮಂಗಳೂರು ರೈಲಿನಲ್ಲಿ ಮಂಗಳೂರು ಕೇಂದ್ರ ರೈಲು ನಿಲ್ದಾಣಕ್ಕೆ ತಲುಪಿದ 162 ಮಿಕ್ಸರ್ ರ್ಗ್ರೈಂಡರ್ ಗಳನ್ನು ಕಮರ್ಷಿಯಲ್ ಟ್ಯಾಕ್ಸ್ಎನ್ಫೋರ್ಸಮೆಂಟ್ ಅಧಿಕಾರಿ
ಬಿಲ್ ರಹಿತ ಮಾಲನ್ನು ಮುಟ್ಟುಗೋಲು ಹಾಕಿ ಕಮರ್ಷಿಯಲ್ ಟ್ಯಾಕ್ಸ್ ಕಚೇರಿಯಲ್ಲಿ ಇರಿಸಲಾಗಿದೆ ಎಂಬ ಮಾಹಿತಿ ಯನ್ನು ಅಧಿಕಾರಿ ಸಭೆಗೆ ನೀಡಿ ದರು.

ಮೆಹಮೂದ್ ಖಾನ್ ಅವರು ಮುಟ್ಟು ಗೋಲು ಹಾಕಿಕೊಂಡಿ ದ್ದಾರೆ ಎಂದು ಜಿಲ್ಲಾಧಿ ಕಾರಿ ಹರ್ಷಗುಪ್ತ ಅವರಿಗೆ ಸಭೆಯ ವೇಳೆ ಮಾಹಿತಿ ನೀಡಿ ದರು.

ರಾಜಕೀಯ ಪಕ್ಷ ಪ್ರತಿನಿಧಿಗಳೊಂದಿಗೆ ಸಭೆ


ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿವಿಧ ಪಕ್ಷಗಳ ಮುಖಂಡರ ಸಭೆ ನಡೆಯಿತು.

Daily Report on Violation Of Model Code of Conduct and Excise Related Cases

VIEW

ಏಪ್ರಿಲ್ 24 ರಿಂದ ವೀಕ್ಷಕರಿಂದ ಚುನಾವಣಾ ವೆಚ್ಚ ಪರಿಶೀಲನೆ

ಮಂಗಳೂರು, ಎಪ್ರಿಲ್. 23: ದಕ್ಷಿಣಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಚುನಾವಣಾ ವೆಚ್ಚ ವೀಕ್ಷಕರಾಗಿ ನೇಮಕವಾಗಿರುವ ವೀಕ್ಷಕರು, ಆಯಾ ಕ್ಷೇತ್ರಗಳ ಚುನಾವಣಾ ಅಧಿಕಾರಿಗಳ ಕಛೇರಿಯಲ್ಲಿ 24-4-2013 ರಿಂದ 3-5-2013 ರವರೆಗೆ ಚುನಾವಣೆಗೆ ಸ್ಪರ್ಧಿಸಿರುವ ಉಮೇದುವಾರರ ವಹಿಗಳ ಪರಿಶೀಲನೆ ಕಾರ್ಯ ನಡೆಸಲಿದ್ದಾರೆ.
               ವಿನೀಶ್ ಚೌಧರಿ ಅವರು 200- ಬೆಳ್ತಂಗಡಿ ಕ್ಷೇತ್ರದ ಉಮೇದುವಾರರ ವಹಿಗಳನ್ನು ದಿನಾಂಕ 24-04-2013, 28-4-2013 ಹಾಗೂ 02-05-2013 ರಂದು ಮಧ್ಯಾಹ್ನ 2.00 ರಿಂದ 5.00 ಗಂಟೆಯವರೆಗೆ ಪರಿಶೀಲಿಸುವರು.
    ಇದೇ ಮೇಲ್ಕಂಡ ದಿನಾಂಕಗಳನ್ನು ಶ್ರೀಯುತ ವಿನೀಶ್ಚೌದರಿ ಅವರು 201 - ಮೂಡಬಿದ್ರೆ ಕ್ಷೇತ್ರದ ಉಮೇದುವಾರರ ವಹಿಗಳನ್ನು ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ಪರಿಶೀಲಿಸುವರು.
         ಮೊಹ್ಮದ್ ಶಂಷದ್ ಆಲಂ ಅವರು 24-04-2013, 28-04-2013 ಹಾಗೂ 02-05-2013 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ಮಂಗಳೂರು ಉತ್ತರ 202 ವಿಧಾನಸಭಾಕ್ಷೇತ್ರದ ಚುನಾವಣಾಧಿಕಾರಿಗಳ ಕಛೇರಿಯಲ್ಲಿ ನಿರ್ವಹಿಸಿರುವ ಅಭ್ಯರ್ಥಿಗಳ ಚುನಾವಣಾ ವೆಚ್ಚ ವಹಿಗಳನ್ನು ಪರಿಶೀಲಿಸುವರು. 203 - ಮಂಗಳೂರು ದಕ್ಷಿಣ ಕ್ಷೇತ್ರದ ಚುನಾವಣಾ ಅಭ್ಯರ್ಥಿಗಳ ವಹಿಗಳನ್ನು ದಿನಾಂಕ 25-4-2013 , 29-4-2013 ಮತ್ತು 3-5-2013 ರಂದು ಬೆಳಿಗ್ಗೆ 10.30 ರಿಂದ 1.00 ರವರೆಗೆ ಚುನಾವಣಾಧಿಕಾರಿಗಳ ಕಛೇರಿಯಲ್ಲಿ ತಪಾಸಣೆ ಮಾಡುವರು.
    204- ಮಂಗಳೂರು ವಿಧಾನಸಭಾಕ್ಷೇತ್ರದ ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದ ವಹಿಗಳನ್ನು ದಿನಾಂಕ 24-4-2013 , 28-4-2013 ಹಾಗೂ 2-5-2013 ರಂದು ಬೆಳಿಗ್ಗೆ 10.00 ರಿಂದ ಸಂಜೆ 5.00 ರ ತನಕ ಚುನಾವಣಾ ವೀಕ್ಷಕರಾದ  ಆರ್.ಆರ್. ಅಗರವಾಲ್ ಅವರು ಪರಿಶೀಲನೆ ಮಾಡುವರು.
    205 - ಬಂಟ್ವಾಳ ವಿಧಾನಸಭಾಕ್ಷೇತ್ರದ ಅಭ್ಯರ್ಥಿಗಳ ಚುನಾವಣಾ ವೆಚ್ಚ ಬಿಲ್ಲುಗಳನ್ನು ದಿನಾಂಕ 25-4-2013 , 29-4-2013 ಹಾಗೂ 03-5-2013 ರಂದು ಬೆಳಿಗ್ಗೆ 10.00 ರಿಂದ ಸಂಜೆ 5.00 ರವರೆಗೆ ಆರ್.ಆರ್. ಅಗರವಾಲ್ ಅವರು ತಪಾಸಿಸಲಿರುವರು.
     206- ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಚುನಾವಣಾ ವೆಚ್ಚ ವಹಿಗಳನ್ನು ದಿನಾಂಕ 25-4-2013 , 29-4-2013 ಹಾಗೂ 03-5-2013 ರಂದು ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.00ರ ವರೆಗೆ ಚುನಾವಣಾಧಿಕಾರಿಗಳ ಕಛೇರಿಯಲ್ಲಿ  ವಿನೀಶ್ ಚೌಧರಿ, ಚುನಾವಣಾ ವೀಕ್ಷಕರು ತಪಾಸಣೆ ಮಾಡುವರು.
      ವಿನೀಶ್ ಚೌಧರಿ ಅವರು 207 ಸುಳ್ಯ ವಿಧಾನಸಭಾಕ್ಷೇತ್ರದ ಅಭ್ಯರ್ಥಿಗಳ ಚುನಾವಣಾ ವೆಚ್ಚ ವಹಿಗಳನ್ನು ದಿನಾಂಕ 25-4-2013 , 29-4-2013 ಹಾಗೂ 3-5-2013 ರಂದು ಮಧ್ಯಾಹ್ನ 2.00ರಿಂದ 5.00 ರವರೆಗೆತಪಾಸಣೆ ಮಾಡಲಿರುವರು.

Monday, April 22, 2013

ಎಂ ಸಿ ಎಂ ಸಿ ಸಮಿತಿ ಸಭೆ

ಮಂಗಳೂರು,ಏಪ್ರಿಲ್.22 : ಮತದಾರರನ್ನು ತಲುಪಲು ಅಪರೋಕ್ಷವಾಗಿ ಸಮೂಹ ಮಾಧ್ಯಮಗಳ ನೆರವು ಪಡೆದು ಸುದ್ದಿಯಲ್ಲಿರುವ ಅಭ್ಯರ್ಥಿಗಳ ಪ್ರಕಟಿತ ಸುದ್ದಿಗಳ ಮೇಲೆ ನಿರಂತರ ನಿಗಾ ವಹಿಸಲಾಗಿದ್ದು, ಸೂಕ್ತ ಸಮಯದಲ್ಲಿ ಅವರಿಗೆ ನೋಟೀಸು ಜಾರಿಯ ಜೊತೆಗೆ ಖರ್ಚು ವೆಚ್ಚ ರಿಜಿಸ್ಟರ್ ನಲ್ಲೂ ನಮೂದಿಸುವ ಕಾರ್ಯದಲ್ಲಿ ಎಂ ಸಿ ಎಂ ಸಿ ಸಮಿತಿ ನಿರತವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು ಆಗಿರುವ  ಹರ್ಷ ಗುಪ್ತ ಅವರು ಹೇಳಿದರು.
ಪ್ರತಿನಿತ್ಯ ಈ ಸಂಬಂಧ ಜಿಲ್ಲಾ ವಾರ್ತಾ ಇಲಾಖೆಯಲ್ಲಿ ನಡೆಯುವ ಎಂಸಿಎಂಸಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಮುಖ್ಯವಾಗಿ ಒಂದು ಕೇಬಲ್ ನ್ಯೂಸ್ ಚಾನೆಲ್ ಈ ಪ್ರಕ್ರಿಯೆಯಲ್ಲಿ ನಿರತವಾಗಿದ್ದು, ಅವರಿಗೆ ಎಚ್ಚರಿಕೆ ನೋಟೀಸು ಹಾಗೂ ಅಭ್ಯರ್ಥಿಗಳಿಗೆ ನೋಟೀಸು ನೀಡಲು ಅವರು ಸೂಚಿಸಿದರು.
ಅಭ್ಯರ್ಥಿಗಳು ತಮ್ಮ ಚುನಾವಣಾ ಪ್ರಚಾರದ ಫೋಟೋಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಲು ಖುದ್ದಾಗಿ ಎಲ್ಲ ಪತ್ರಿಕೆಗಳಿಗೆ ತಲುಪಿಸುತ್ತಿರುವ ರೀತಿಯ ಬಗ್ಗೆಯೂ ಸಭೆ ಚರ್ಚಿಸಿತು. ಸುದ್ದಿಯ ಮಹತ್ವವಿಲ್ಲದ ಸುದ್ದಿಗಳು ಭಾವಚಿತ್ರಗಳೊಂದಿಗೆ ಸುದ್ದಿಯಾಗಿ ಪ್ರಕಟಗೊಳ್ಳುತ್ತಿರುವ ಬಗ್ಗೆ, ಸ್ಥಳೀಯ ಚಾನೆಲ್ ಗಳಲ್ಲಿ ಬಂದ ಸುದ್ದಿಗಳೇ ವಿವಿಧ ರೂಪದಲ್ಲಿ 24 ಗಂಟೆಯೂ ಕಳೆದ ಐದಾರು ದಿನಗಳಿಂದ ಮರುಪ್ರಸಾರಗೊಳ್ಳುತ್ತಿರುವ ಸಭೆ ಚರ್ಚೆ ನಡೆಸಿ ಕ್ರಮಕೈಗೊಳ್ಳಲು ತೀರ್ಮಾನಿಸಿತು.
ನೇರವಾಗಿ 'ಕಾಸಿಗಾಗಿ ಸುದ್ದಿ'ಯನ್ನಾಗಿ ಇಂತಹ ಸುದ್ದಿಗಳನ್ನು ಪರಿಗಣಿಸುವ ಬಗ್ಗೆಯೂ ಸಭೆ ಚರ್ಚಿಸಿತು.
ಚುನಾವಣಾ ಪ್ರಚಾರದಲ್ಲಿ ನಿರತವಾಗಿರುವ ಅಭ್ಯರ್ಥಿಗಳು ತಾವು ಮತದಾರರನ್ನು ಓಲೈಸಲು ಸುದಿಯಲ್ಲದ ಬಾವಚಿತ್ರಗಳನ್ನು ಸುದ್ದಿಯನ್ನಾಗಿ ಪ್ರಕಟಪಡಿಸುತ್ತಿರುವುದು ಖರ್ಚು ವೆಚ್ಚಕ್ಕೆ ಹಾಕುವುದಲ್ಲದೆ ಅದನ್ನು ಅಪರಾಧವೆಂದು ಪರಿಗಣಿಸುವ ಬಗ್ಗೆಯೂ ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ಪಾಲಿಕೆ ಆಯುಕ್ತರಾದ ಡಾ ಹರೀಶ್ ಅವರನ್ನೊಳಗೊಂಡಂತೆ ಸಮಿತಿಯ ಸದಸ್ಯರು ಉಪಸ್ಥಿತರಿದ್ದು ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.

ಅಧಿಕಾರಿಗಳು ಮತ್ತು ಚುನಾವಣಾ ವೀಕ್ಷಕರ ಸಭೆ

ಮಂಗಳೂರು, ಏಪ್ರಿಲ್. 22ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುವ್ಯವಸ್ಥಿತ ಚುನಾವಣೆ ನಡೆಸಲು ಹಾಗೂ ಜಿಲ್ಲೆಯಿಂದ ರಾಜ್ಯಕ್ಕೆ ಹೊಸದೊಂದು ಪೈಲೆಟ್ ಮಾದರಿ ನೀಡುವ ನಿಟ್ಟಿನಲ್ಲಿ ಚುನಾವಣಾ ಪ್ರಕ್ರಿಯೆಗೆ ತಾಂತ್ರಿಕತೆ ನೆರವಿನೊಂದಿಗೆ ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹರ್ಷಗುಪ್ತ ಅವರು ಹೇಳಿದರು.
         ಭಾನುವಾರ ಜಿಲ್ಲೆಗೆ ಆಗಮಿಸಿರುವ ಎಲ್ಲ ಚುನಾವಣಾ ವೀಕ್ಷಕರು ಮತ್ತು ಚುನಾವಣಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ಮಾರ್ಟ್  ಫೋನ್ ಮತ್ತು ವಾಕಿಟಾಕಿ, ಕಂಟ್ರೋಲ್ ರೂಮ್ ಹಾಗೂ ಎಂಸಿಎಂಸಿ ಸಮಿತಿಯನ್ನು ರಚಿಸಲಾಗಿದ್ದು, ಏಕಗವಾಕ್ಷಿ ಯೋಜನೆಯನ್ನು ರೂಪಿಸಲಾಗಿದೆ. ಜಿಲ್ಲೆಯಾದ್ಯಂತ ಒಂದೇ ಚುನಾವಣಾ ರೀತಿ-ನೀತಿ ರೂಪಿಸಲು ಎಲ್ಲರೊಂದಿಗೆ ಚರ್ಚಿಸಿ ಸಮಗ್ರ ಯೋಜನೆ ರೂಪಿಸಿದ್ದೇನೆ.
ಈ ಸಂಬಂದ ಚುನಾವಣಾ ಆಯೋಗದ ನಿರ್ದೇಶನದಡಿ ಹಲವು ಸುತ್ತೋಲೆಗಳನ್ನು ಜಿಲ್ಲಾ ಚುನಾವಣಾಧಿಕಾರಿಗಳು ಹೊರಡಿಸಿದ್ದು, ಆಡಿಯೋ ಕಾನ್ಫರೆನ್ಸ್ ಹಾಗೂ ಆರ್ ಒ ಗಳ ವಿಶೇಷ ಸಭೆ ನಡೆಸುವ ಮೂಲಕ ಕಾಲಕಾಲಕ್ಕೆ ಎಲ್ಲಿಯೂ ಮಾಹಿತಿಕೊರತೆ ಸಂಭವಿಸದಂತೆ ಚುನಾವಣಾ ಕರ್ತವ್ಯ ನಿರ್ವಹಿಸಲಾಗುತ್ತಿದೆ.
ಎಲ್ಲ ಚುನಾವಣಾಧಿಕಾರಿಗಳು ಎಲ್ಲ ಮಾಹಿತಿಯನ್ನು ಆನ್ ಲೈನ್ ಮೂಲಕ ವೀಕ್ಷಿಸುವಂತೆ ಅವರಿಗೆ ಲಾಗ್ ಇನ್ ನಂಬರ್ ನೀಡಲಾಗುತ್ತದೆ. ಎಲ್ಲರೂ ಚುನಾವಣಾ ಕರ್ತವ್ಯದಲ್ಲಿ ನಿರತವಾಗಿರುವ ಸಂದರ್ಭದಲ್ಲಿ ಪರಸ್ಪರ ತೊಂದರೆಯಾಗದಂತೆ ಮಾಹಿತಿ ಸಂಗ್ರಹಿಸಲು 
www.dk.nic.inಸೈಟ್ ಸಂಪರ್ಕಿಸಿ ಎಲ್ಲ ಮಾಹಿತಿಗಳನ್ನು ಒಂದೆಡೆ ಪಡೆಯಬಹುದಾಗಿದೆ.
ವಾಹನಕ್ಕೆ ಅನುಮತಿ, ಜಾಹೀರಾತಿಗೆ ಅನುಮತಿ, ಸಭೆ ಸಮಾರಂಭಗಳಿಗೆ ಅನುಮತಿ ನೀಡಿರುವ ಮಾಹಿತಿ ಎಲ್ಲವೂ ಇಲ್ಲಿ ಲಭ್ಯವಿದ್ದು, ಖರ್ಚು ವೆಚ್ಚ ವೀಕ್ಷಕರಿಗೆ ಶ್ಯಾಡೋ ರಿಜಿಸ್ಟರ್ ರಚಿಸುವ ಸಂದರ್ಭದಲ್ಲಿ ಇದು ನೆರವಾಗಲಿದೆ. ಇನ್ನು ಯಾವುದೇ ದೂರು ಅಥವಾ ಸಲಹೆಗಳನ್ನು ಕಂಟ್ರೋಲ್ ರೂಂ 1077 24 ಗಂಟೆಯೂ ತೆರೆದಿರುತ್ತದೆ.
ಇಂದು ಮಾಸ್ಟರ್ ಟ್ರೈನರ್ಸ್ ಹಾಗೂ ಚುನಾವಣಾಧಿಕಾರಿಗಳಿಗೆ ತರಬೇತಿಯನ್ನು ನೀಡಲಾಗಿದ್ದು, ಚುನಾವಣೆಯಲ್ಲಿ ಎಲ್ಲವನ್ನೂ ಸುವ್ಯವಸ್ಥಿತವಾಗಿ ನಿರ್ವಹಿಸಲು ವ್ಯವಸ್ಥೆ ಮಾಡಲಾಗಿದೆ. ಚುನಾವಣಾ ಪ್ರಕ್ರಿಯೆ ಇದೇ ಮಾದರಿಯಲ್ಲಿ ಮುಂದುವರಿದರೆ ಸ್ಮಾಟ್ರ್  ಫೋನ್ ವ್ಯವಸ್ಥೆ ತಮ್ಮ ಯೋಚನೆಯಂತೆ ಅನುಷ್ಠಾನಗೊಂಡರೆ ಇದು ಪೈಲೆಟ್ ಯೋಜನೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಸಭೆಯಲ್ಲಿ ಚುನಾವಣಾ ವೀಕ್ಷಕರಾದ ಪುಷ್ಪವತಿ ಸೆಕ್ಸೆನಾ, ರಾಮಕುಮಾರ್, ದಿನೇಶ್ ಗೋಯಲ್, ಜಗದೀಶ್ ಪಾಟೀಲ್, ಮುಖೇಶ್ ಕುಮಾರ್, ಆರ್ ಸಿ ವರ್ಮಾ ಉಪಸ್ಥಿತರಿದ್ದರು.  ಎಲ್ಲ ಚುನಾವಣಾಧಿಕಾರಿಗಳು ಉಪಸ್ಥಿತರಿದ್ದರು.
 

Sunday, April 21, 2013

ಅಧಿಕಾರಿಗಳಿಗೆ ಚುನಾವಣಾ ತರಬೇತಿ

ಮಂಗಳೂರು,ಏಪ್ರಿಲ್. 21: ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ  ಹರ್ಷಗುಪ್ತ ಅವರ ಅಧ್ಯಕ್ಷತೆಯಲ್ಲಿ ಮಾಸ್ಟರ್ ಟ್ರೈನರ್, ಸೆಕ್ಟರ್ ಆಫೀಸರ್ಸ್, ಸೆಕ್ಟರ್ ಮ್ಯಾಜಿಸ್ಟೇಟ್ ಗಳಿಗೆ ಒಂದು ದಿನದ ವಿಶೇಷ ತರಬೇತಿ ನೀಡಲಾಯಿತು.
ಇಂದು ತರಬೇತಿ ಪಡೆದ ಅಧಿಕಾರಿಗಳು ಪ್ರಿಸೈಂಡಿಗ್ ಅಧಿಕಾರಿಗಳಿಗೆ ಹಾಗೂ ಪೋಲಿಂಗ್ ಅಧಿಕಾರಿಗಳಿಗೆ ತಮ್ಮ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ತರಬೇತಿ ನೀಡಲಿರುವರು.