Friday, May 3, 2013

ದೇಶದ ಪ್ರಗತಿಗಾಗಿ ಮತದಾನದಲ್ಲಿ ಪಾಲ್ಗೊಳ್ಳಿ; ಯುವಜನತೆಗೆ ಜಿಲ್ಲಾಧಿಕಾರಿ ಕರೆ

ಮಂಗಳೂರು,ಮೇ.03:- ದೇಶದ ಎಲ್ಲಾ ಯುವಜನತಯೆ ಮತದಾನದಲ್ಲಿ ಖಡ್ಡಾಯವಾಗಿ ಭಾಗವಹಿಸಿ ಸೂಕ್ತ ವ್ಯಕ್ತಿಯನ್ನು ಚುನಾಯಿಸಿದಲ್ಲಿ ದೇಶದ ಪ್ರಗತಿ ಯ ದಕ್ಕೇ ಬದಲಾಗಲಿದೆ, ಆದ್ದರಿಂದ ಎಲ್ಲಾ ಯುವಪೀಳಿಗೆ ಮತದಾನದಲ್ಲಿ ಭಾಗವಹಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಹರ್ಷಗುಪ್ತ ಅವರು ಯುವಜನತೆಗೆ ಕರೆನೀಡಿದ್ದಾರೆ.
     ಅವರು ಗುರುವಾರ ಸಂಜೆ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ನೆಹರು ಯುವಕೇಂದ್ರ, ಮಂಗಳೂರು, ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯತ್, ಮಂಗಳೂರು, ಲಯನ್ಸ ಕ್ಲಬ್,ಮಂಗಳೂರು ಹಾಗೂ ಅಸೊಸಿಯೇಷನ್ ಆಫ್ ಕನ್ಸಟ್ರಕ್ಷನ್ ಇಂಜಿನಿಯರ್ಸ್(ಇಂ)ಮಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮತದಾರರ ಜಾಗೃತಿ ಕಾರ್ಯಕ್ರಮದ ಅಂಗವಾಗಿ ನಡೆದ ಕ್ಯಾಂಡಲ್ ಶೋ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು.
     ಇಂದು ಸ್ವೀಪ್ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಷ್ಟೋಂದು ಅರ್ಥಪೂರ್ಣವಾಗಿ ಜರುಗುತ್ತಿರುವುದು ತುಂಬಾ ಶ್ಲಾಘನೀಯವಾಗಿದೆ ಎಂದು ಪ್ರಶಂಸಿಸಿದರು.
     ಸಮಾರಂಭದಲ್ಲಿ ಉಪಸ್ಥಿತರಿದ್ದ ದ.ಕ.ಜಿಲ್ಲಾಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ|ಕೆ.ಎನ್.ವಿಜಯಪ್ರಕಾಶ್ ಅವರು ಮಾತನಾಡಿ ಮತದಾರರ ಜಾಗೃತಿ ಕಾರ್ಯಕ್ರಮ ಒಂದುದಿನದ ಕಾರ್ಯಕ್ರಮವಲ್ಲ ಬದಲಾಗಿ ನಿರಂತರವಾಗಿ ವರ್ಷಪೂರ್ತಿ ನಡೆಯುತ್ತಿರಬೇಕು ಅದಕ್ಕಾಗಿಯೇ ಭಾರತದ ಭೂಪಟದ ಸುತ್ತಲೂ 365 ನಂದಾದೀಪಗಳನ್ನು ಹಚ್ಚಲಾಗಿದೆ ಎಂದು ತಿಳಿಸಿದರು.
     ಸಮಾರಂಭದಲ್ಲಿ ಮಂಗಳೂರು ಮಹಾನಗರಪಾಲಿಕೆ ಆಯುಕ್ತರಾದ ಡಾ|ಹರೀಶ್ ಕುಮಾರ್ ಮುಂತಾದವರು ಹಾಜರಿದ್ದರು.

No comments: