ಮಂಗಳೂರು, ಏಪ್ರಿಲ್. 25: ರಾಜ್ಯ
ವಿಧಾನಸಭಾ ಚುನಾವಣೆ-2013 ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಚುನಾವಣಾ
ನೀತಿ ಸಂಹಿತೆ ಜಾರಿಯಲ್ಲಿದ್ದು ಯಾವುದೇ ವ್ಯಕ್ತಿ ಯಾವುದೇ ಉದ್ದೇಶಕ್ಕೆ ರೂ.50,000
ರೂ.ಗಳಿಗಿಂತ ಹೆಚ್ಚು ನಗದು ತಮ್ಮ ಜೊತೆ ಇರಿಸಿಕೊಂಡಿದ್ದರೆ ಅದಕ್ಕೆ ಪೂರಕ
ದಾಖಲೆಗಳನ್ನಿರಿಸಿಕೊಳ್ಳಬೇಕು.
ಜಿಲ್ಲೆಯ ಎಲ್ಲೆಡೆ ಅಕ್ರಮ ತಡೆಗೆ
ಕಣ್ಗಾವಲಿರಿಸಲಾಗಿದ್ದು, ಅನುಮಾನಕ್ಕೆಡೆಯಾದ ನಗದು ಅಥವಾ ಉಡುಗೊರೆ ವಸ್ತುಗಳಿದ್ದರೆ
ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹರ್ಷ ಗುಪ್ತ ಅವರು
ಮತ್ತೊಮ್ಮೆ ಎಚ್ಚರಿಸಿದ್ದಾರೆ.
No comments:
Post a Comment