ಮಂಗಳೂರು, ಎಪ್ರಿಲ್. 10:- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ
ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ ಇವರ ಸಂಯುಕ್ತಾಶ್ರಯದಲ್ಲಿ ಮೂರು ಇಲಾಖೆಗಳ
ಸಿಬ್ಬಂದಿ ವರ್ಗದವರಿಂದ ಮಂಗಳೂರು ತಾಲೂಕು ಆರೋಗ್ಯಾಧಿಕಾರಿ ಡಾ.ರತ್ನಾಕರ್ ಇವರ
ನೇತೃತ್ವದಲ್ಲಿ ಮೆರವಣಿಗೆ ನಡೆಯಿತು.ವಾರ್ತಾ ಮತ್ತು ಆರೋಗ್ಯ ಇಲಾಖೆ ಕಚೇರಿ
ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯ ವರೆಗೆ ಮತದಾನ ನಮ್ಮ ಹಕ್ಕು, ಎಲ್ಲರೂ ಮತದಾನ
ಮಾಡಿ,ನಿಮ್ಮ ಮತ ದೇಶಕ್ಕೆ ಹಿತವೆಂಬ ಘೋಷಣೆಗಳೊಂದಿಗೆ ಜಾಥಾ ಏರ್ಪಡಿಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ಮಾನವ ಸರಪಳಿಯನ್ನು ನಿರ್ಮಿಸಿ ನಾಗರೀಕರಿಗೆ ಮತದಾನದ
ಹಕ್ಕಿನ ಬಗ್ಗೆ ತಿಳಿಸಲಾಯಿತು ಹಾಗೂ ಜಾಥಾದಲ್ಲಿ ಭಾಗವಹಿಸಿದ ಎಲ್ಲರಿಂದ ಪ್ರಮಾಣ
ಮಾಡಿಸಲಾಯಿತು.
No comments:
Post a Comment