Thursday, April 25, 2013

ಸಹಾಯಕ ಖರ್ಚು ವೆಚ್ಚ ವೀಕ್ಷಕರ ವಿಶೇಷ ಸಭೆ

ಮಂಗಳೂರು, ಏಪ್ರಿಲ್. 25 : ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯನ್ನು ಸಮರ್ಪಕವಾಗಿ ನಡೆಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕೈಗೊಂಡಿರುವ ವಿನೂತನ ಕ್ರಮಗಳ ಬಗ್ಗೆ ಸಹಾಯಕ ಖರ್ಚುವೆಚ್ಚ ವೀಕ್ಷಕರಿಗೆ ಜಿಲ್ಲಾಧಿಕಾರಿ ಹರ್ಷಗುಪ್ತ ಅವರು ಮಾಹಿತಿ ನೀಡಿದರು.
           ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾಗಿದ್ದ ವಿಶೇಷ ಸಭೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು ಚುನಾವಣೆಯಲ್ಲಿ ಖಚರ್ುವೆಚ್ಚ ವೀಕ್ಷಕರ ಪಾತ್ರ ಅತ್ಯಂತ ಪ್ರಮುಖವಾಗಿದ್ದು ಅವರಿಗೆ ಅಗತ್ಯವಿರುವ ಎಲ್ಲ ಪೂರಕ ಮಾಹಿತಿಗಳನ್ನು ನೀಡಲು ಜಿಲ್ಲಾಡಳಿತ ಕೈಗೊಂಡಿರುವ ಆನ್ ಲೈನ್ ಮಾಹಿತಿಯ ಬಗ್ಗೆ ವಿವರಿಸಿದರು.
ಇದರಿಂದ ಖರ್ಚು ವೆಚ್ಚ ವೀಕ್ಷಕರಿಗೆ ಶ್ಯಾಡೋ ರಿಜಿಸ್ಟರ್ ನಿರ್ವಹಣೆಗೆ ಅನುಕೂಲವಾಗಲಿದೆ. ಪ್ರತಿಯೊಂದು ವರದಿಗೂ ವಿವಿಧ ಕರ್ತವ್ಯಗಳಲ್ಲಿ ನಿರತವಾಗಿರುವ ಅಧಿಕಾರಿಗಳನ್ನು ನಿರಂತರ ಸಂಪಕರ್ಿಸುವ ಹಾಗೂ ಮಾಹಿತಿ ಕೋರುವ ಕೆಲಸ ತಪ್ಪಲಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಅಧಿಕಾರಿಗಳು ತಮ್ಮ ಅಧಿಕಾರ ವ್ಯಾಪ್ತಿಯನ್ನು ಅರಿತು ಸಂಪೂರ್ಣವಾಗಿ ಕ್ರಮಕೈಗೊಳ್ಳಲು ಪ್ರೇರೇಪಿಸಿದ ಜಿಲ್ಲಾಧಿಕಾರಿಗಳು, ಕೆಲಸವನ್ನು ಸುಸೂತ್ರವಾಗಿ ನಿರ್ವಹಿಸಲು ತಾಂತ್ರಿಕತೆಯ ನೆರವಿನಿಂದ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. 

No comments: