Sunday, April 21, 2013

ರಾಜಕೀಯ ಪಕ್ಪಗಳು ಮತ್ತು ಚುನಾವಣಾ ವೀಕ್ಷಕರ ಸಭೆ

ಮಂಗಳೂರು,ಏಪ್ರಿಲ್ .21:ರಾಜ್ಯ ಸಾರ್ವತ್ರಿಕ ಚುನಾವಣೆ-2013ನ್ನು ಯಶಸ್ವಿಯಾಗಿ ನಿರ್ವಹಿಸಲು ಎಲ್ಲರ ಸಹಕಾರದ ಅಗತ್ಯವಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹರ್ಷಗುಪ್ತ ಅವರು ಹೇಳಿದರು.
                ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾದ ರಾಜಕೀಯ ಪಕ್ಷಗಳ ಮತ್ತುಚುನಾವಣಾ ವೀಕ್ಷಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಚುನಾವಣಾ ಆಯೋಗದ ನಿರ್ದೇಶನದಡಿ ಜಿಲ್ಲಾಡಳಿತ ಸುವ್ಯವಸ್ಥಿತ ಚುನಾವಣೆಗೆ ಹಲವು ಕ್ರಮಗಳನ್ನು ಕೈಗೊಂಡಿದೆ. ಕಾನೂನು ಪಾಲನೆಗೆ ಪೂರಕವಾಗಿಎಲ್ಲ ಕ್ರಮಗಳನ್ನು ತಂತ್ರಜ್ಞಾನಗಳನ್ನು ಬಳಸಿ ಅಳವಡಿಸಲಾಗಿದೆ.ರಾಜಕೀಯ ಪಕ್ಷಗಳಿಗೆ ಎಲ್ಲರೀತಿಯ ಅನುಮತಿ ಪಡೆಯಲು ಏಕಗವಾಕ್ಷಿ ವ್ಯವಸ್ಥೆಯನ್ನು ಮಾಡಲಾಗಿದೆ.
ಚುನಾವಣೆಯನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸಲು ಜಿಲ್ಲಾಡಳಿತ ಕೈಗೊಂಡಿರುವಎಲ್ಲ ಕ್ರಮಗಳನ್ನು ಹಾಗೂ ವ್ಯವಸ್ಥೆಗಳನ್ನು ರಾಜಕೀಯ ಪಕ್ಷ ಮುಖಂಡರಿಗೆ ಜಿಲ್ಲಾಧಿಕಾರಿಗಳು ವಿವರಿಸಿದರು.ಯಾವುದೇ ಸಮಸ್ಯೆಗೆ 1077 ಕಂಟ್ರೋಲ್ ರೂಂ ಸಂಪರ್ಕಿಸಿ ಎಂದು ಅವರು ಹೇಳಿದರು. ಗುರುತಿಸಲ್ಪಟ್ಟ ಪಕ್ಷಗಳ ಅಭ್ಯರ್ಥಿಗಳಿಗೆ ಮತದಾರರ ಪಟ್ಟಿಯನ್ನು ಶೀಘ್ರವೇ ವಿತರಿಸಲಾಗುವುದು ಎಂದ ಅವರು, ಸ್ವೀಪ್(ಮತದಾರರ ಜಾಗೃತಿ ಕಾರ್ಯಕ್ರಮ) ನಿಂದಾಗಿ ಮತದಾರರ ಪಟ್ಟಿಗೆ ಸುಮಾರು 62,000 ಹೆಸರು ಸೇರ್ಪಡೆಗೊಂಡಿದ್ದು, ಪೋಸ್ಟಲ್ ಬ್ಯಾಲೆಟ್ ಮತ್ತು ಸರ್ವಿಸ್ ವೋಟ್ ಗಳು ಲೋಪವಾಗದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ.
ರಾಜಕೀಯಪಕ್ಷಗಳ ಮುಖಂಡರುತಮ್ಮ ಸಮಸ್ಯೆಗಳನ್ನು, ಸಂಶಯಗಳನ್ನು ಸಭೆಯ ಮುಂದಿಟ್ಟರು.
 ಮತದಾನ ಮಾಡಲು ಬಿಎಲ್ಒಗಳು ಕೊಡುವ ವೋಟರ್ ಸ್ಲಿಪ್ ಕಾನೂನು ಬದ್ಧವಾಗಿದ್ದು, ಇತರ ಯಾವುದೇ ಗುರುತು ಪತ್ರ ಮತದಾನ ಮಾಡಲು ಅಗತ್ಯವಿರುವುದಿಲ್ಲ. ಹಾಗಾಗಿ ಮತದಾರರು ತಮ್ಮ ಮತ ಚಲಾಯಿಸಲು ವೋಟರ್ ಸ್ಲಿಪ್ ಬಳಸಿಕೊಳ್ಳಿ ಎಂದು ಜಿಲ್ಲಾಧಿಕಾರಿಗಳು ಸಲಹೆ ಮಾಡಿದರು. ಪೊಲೀಸ್ ಕಮಿಷನರ್ ಮನೀಷ್ ಕರ್ಬಿಕರ್, ಅಪರಜಿಲ್ಲಾಧಿಕಾರಿದಯಾನಂದ, ಪಾಲಿಕೆ ಆಯುಕ್ತರಾದ ಡಾ. ಹರೀಶ್, ಎಲ್ಲ ಚುನಾವಣಾಧಿಕಾರಿಗಳು, ಎಸ್ ಪಿ ಅಭಿಷೇಕ್ ಗೋಯಲ್ ಹಾಗೂ ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಭೆಯಲ್ಲಿದ್ದರು.

No comments: