Saturday, April 6, 2013

ಸ್ವೀಪ್ ಕಾರ್ಯಕ್ರಮದಡಿ ಮೈಮ್ ಶೋ ಸಿಡಿ ಬಿಡುಗಡೆ

ಮಂಗಳೂರು, ಎ.06: ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಮತದಾರರ ಭಾಗವಹಿಸುವಿಕೆ ಯೋಜನೆ (ಸ್ವೀಪ್) ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ದ.ಕ. ಜಿಲ್ಲಾಡಳಿತದ ವತಿಯಿಂದ ಇಂದು ಮೈಮ್ ಶೋ ಸಿಡಿ ಬಿಡುಗಡೆ ಕಾರ್ಯಕ್ರಮ ನಡೆಯಿತು.

`ಮತದಾನ ನನ್ನ ಹಕ್ಕು ಅದನ್ನು ದುಡ್ಡಿಗಾಗಿ, ಸಾರಾಯಿಗಾಗಿ ಮಾರಲಾರೆ, ಬೆದರಿಕೆಗೆ ಮಣಿಯಲಾರೆ' ಎಂಬ ಮತದಾರನ ದಿಟ್ಟ ನಿಲುವನ್ನು ಮೈಮ್ ಶೋದಲ್ಲಿ ಪ್ರದಶರ್ಿಸುವ ಮೂಲಕ ಮತದಾನದ ಹಕ್ಕಿನ ಮಹತ್ವವನ್ನು ತಿಳಿಸಲಾಗಿದೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮೈಮ್ ರಾಮ್ದಾಸ್ ಮತ್ತು ತಂಡದಿಂದ ರಚಿಸಲಾಗಿರುವ ಈ ಮೈಮ್ ಶೋನ ಸಿಡಿಯನ್ನು ದ.ಕ. ಜಿಲ್ಲಾಧಿಕಾರಿ ಹರ್ಷಗುಪ್ತ ಬಿಡುಗಡೆಗೊಳಿಸಿದರು.
ಈ ಸಂದರ್ಭ ಉಪಸ್ಥಿತರಿದ್ದ ಸ್ತ್ರೀಶಕ್ತಿ ಗುಂಪುಗಳ ಕಾರ್ಯಕರ್ತರಿಗೆ ಮತದಾನದ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದ ಜಿಲ್ಲಾಧಿಕಾರಿ ಹರ್ಷ ಗುಪ್ತ, ಸ್ವೀಪ್ ಕಾರ್ಯಕ್ರಮಕ್ಕೆ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇದು ಕಾಟಾಚಾರದ ಕಾರ್ಯಕ್ರಮವಾಗದೆ, ಪರಿಣಾಮಕಾರಿಯಾಗಿ ಅರ್ಹ ಮತದಾರರನ್ನು ತಲುಪುವ ಕೆಲಸವಾಗುತ್ತಿದೆ. ಚುನಾವಣೆಯಲ್ಲಿ ಪ್ರಮುಖ ಪಾತ್ರಧಾರಿ ಮತದಾರ. ಮತದಾರರನ್ನು ಮುಖ್ಯವಾಗಿಸಿರುವುದೇ ಸ್ವೀಪ್. ಮತದಾನದ ಬಗ್ಗೆ ನಿರ್ಲಕ್ಷ್ಯ ಅಸಡೆ ಮೂಡದಿರುವ ಬಗ್ಗೆ ಈ ಪ್ರಮುಖ ಯತ್ನ.  ಚುನಾವಣೆಯಲ್ಲಿ ಮತದಾನದಲ್ಲಿಯೂ ಶೇಕಡಾವಾರು ಹೆಚ್ಚಳವಾಗುವ ಭರವಸೆ ಹುಟ್ಟಿಸಿದೆ ಎಂದರು.
ದ.ಕ. ಜಿಲ್ಲೆಯಲ್ಲಿ ಮಾದರಿ ಚುನಾವಣೆಯನ್ನು ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಕಲ ಕ್ರಮಗಳನ್ನು ಕೈಗೊಂಡಿದ್ದು, ಮತದಾರರನ್ನು ಯಾವುದೇ ರೀತಿಯಲ್ಲಿ ಪ್ರಲೋಭನೆಗೊಳಪಡಿಸಲಾಗುವ ಬಗ್ಗೆ ದೂರು ನೀಡಿದ್ದಲ್ಲಿ ಸೂಕ್ತ ಕ್ರಮ ತೆಗೆದುಕೊಂಡಲ್ಲಿ ಚುನಾವಣಾ ಅಕ್ರಮ ನಡೆಯದು ಎಂದು ಹೇಳಿದರು.
ಮಲ್ಟಿಫ್ಲೆಕ್ಸ್, ಬಸ್ಸು, ಇಲಾಖೆಗಳಲ್ಲಿ ಮೈಮ್ ಶೋ ಸಿಡಿ ಪ್ರದರ್ಶನ
ಇಂದು ಬಿಡುಗಡೆಗೊಂಡ ಮೈಮ್ ಶೋ ಸಿಡಿ ಪ್ರದರ್ಶನದ ಅವಧಿ ಸುಮಾರು 10 ನಿಮಿಷಗಳದ್ದಾಗಿದ್ದು, ಇದನ್ನು ನಗರದ ಮಲ್ಟಿಫ್ಲೆಕ್ಸ್ಗಳಲ್ಲಿ, ದೂರದೂರುಗಳಿಗೆ ಸಂಚರಿಸುವ ಬಸ್ಸುಗಳಲ್ಲಿ ಹಾಗೂ ಟೆಲಿವಿಶನ್ ಸೌಲಭ್ಯವಿರುವ ಎಲ್ಲಾ ಇಲಾಖೆಗಳಲ್ಲಿ ಪ್ರದಶರ್ಿಸುವ ಮೂಲಕ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ದ.ಕ. ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ. ಕೆ.ಎನ್. ವಿಜಯಪ್ರಕಾಶ್ ತಿಳಿಸಿದರು. ಈ ಸಂದರ್ಭ ಮನಪಾ ಆಯುಕ್ತ ಡಾ. ಹರೀಶ್ ಕುಮಾರ್ ಉಪಸ್ಥಿತರಿದ್ದರು.

ಮತದಾರರ ಪಟ್ಟಿ ಪರಿಷ್ಕರಣ ಕೇಂದ್ರ: ಜಿಲ್ಲಾಧಿಕಾರಿ ಅನಿರೀಕ್ಷಿತ ಭೇಟಿ, ಪರಿಶೀಲನೆ
ಮಂಗಳೂರು,ಏಪ್ರಿಲ್.06: ಯುವಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವ ಪ್ರಕ್ರಿಯೆಯನ್ನು ಪರಿಶೀಲಿಸಲು ಜಿಲ್ಲಾಧಿಕಾರಿ ಹರ್ಷ ಗುಪ್ತ ಅವರು ಖುದ್ದಾಗಿ ಏಪ್ರಿಲ್ 5 ರಂದು ಮಹಾನಗರಪಾಲಿಕೆ ಮತದಾರರ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿರುವ ಸಾಫ್ಟವೇರ್ ಹಾಗೂ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಸಿಬ್ಬಂದಿಗಳ ಕಾರ್ಯವೈಖರಿಯನ್ನು ಖುದ್ದಾಗಿ ಪರಿಶೀಲಿಸಿದರು.
ಸ್ಟೇಟ್ ಎನ್ಹ್ಯಾನ್ಸಡ್ ಇಲೆಕ್ಟ್ರಲ್ ರೋಲ್ ಸಿಸ್ಟಂ ಮತದಾರರ ಸೇರ್ಪಡೆಗಿರುವ ವಿಶೇಷ ಸಾಫ್ಟ್ ವೇರ್ ಇದಾಗಿದ್ದು, ಸಮಗ್ರ ಮಾಹಿತಿಗಳಿಲ್ಲದೆ ಫಾರ್ಮ 6ನ್ನು ಇದು ಸ್ವೀಕರಿಸುವುದಿಲ್ಲ. ಈ ಸಾಫ್ಟ್ ವೇರ್ ನ ಕಾರ್ಯವೈಖರಿಯನ್ನು ಅವರು ಪರಿಶೀಲಿಸಿದರು.
ಮತದಾರರ ಜಾಗೃತಿ ಸ್ವೀಪ್ ಕಾರ್ಯಕ್ರಮಕ್ಕೆ ಪ್ರಚಾರ ನೀಡುವ ಕಾರ್ಯಕ್ರಮದ ಅಂಗವಾಗಿ ಅಲ್ಲಿಂದ ಆಕಾಶವಾಣಿಗೆ ತೆರಳಿದ ಜಿಲ್ಲಾಧಿಕಾರಿಗಳು, ಅಲ್ಲಿ ಮತದಾನದ ಮಹತ್ವದ ಬಗ್ಗೆ ಓದುಗರಿಗೆ ಸಂದೇಶ ನೀಡಿದರು.
ಅಲ್ಲಿಂದ ತಾಲೂಕು ಪಂಚಾಯಿತಿ ಕಚೇರಿಗೂ ಸಿಯರ್ಸ್ ಸಾಫ್ಟ್ವೇರ್ ಅಳವಡಿಕೆ ಸಂಬಂಧ ತೆರಳಿ ಪರಿಶೀಲನೆ ನಡೆಸಿದರು.

 ಪಕ್ಷ ಮುಖಂಡರ ಸಮ್ಮುಖದಲ್ಲಿ ಇವಿಎಂ ಪರಿಶೀಲನೆ : ಮಂಗಳೂರು ಏಪ್ರಿಲ್ 6:  ಇವಿಎಂ ರ್ಯಾಂಡ್ಮೈಸೇಷನ್(ಮತಪೆಟ್ಟಿಗೆ ಮಿಶ್ರಣ) ಪ್ರಥಮ ಹಂತದ ಕಾರ್ಯಕ್ರಮ ಪ್ರಮುಖ ಪಕ್ಷಗಳ ಮುಖಂಡರ ಎದುರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯಿತು.








 

No comments: