Friday, April 19, 2013

ಡೋಲುವಾದನದ ಮೂಲಕ ಮತದಾರರ ಜಾಗೃತಿ

ಮಂಗಳೂರು,ಏಪ್ರಿಲ್ .19: ಅಪ್ನಾದೇಶ್, ಜನ ಶಿಕ್ಷಣ ಟ್ರಸ್ಟ್, ಬಾಳೆಪುಣಿ ಗ್ರಾಮ ಪಂಚಾಯತ್, ಆದಿವಾಸಿ ಕೊರಗ ಅಭಿವೃದ್ಧಿ ಸಂಘ ಮತ್ತು ಮಾದರಿ ಗ್ರಾಮ ವಿಕಾಸ ಕೇಂದ್ರದ ಸಹಯೋಗದಲ್ಲಿ ಮತದಾನದ ಮಹತ್ವದ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಬಾಳೆಪುಣಿ ಪಂಚಾಯತ್ಯ ಹೂಹಾಕುವಕಲ್ಲು ಆದಿವಾಸಿ ಮತ್ತು ಜನತಾ ನಿವೇಶನದ ಪ್ರದೇಶಗಳಲ್ಲಿ ನಡೆಸಲಾಯಿತು. ಕುಕ್ಕುದಕಟ್ಟೆಯ ಆದಿವಾಸಿ ಕಲಾ ತಂಡದ ಬಾಬು ಮತ್ತು ಸುರೇಶರವರ ನೇತೃತ್ವದ ಡೋಲು ಕಲಾ ಪ್ರದರ್ಶನ, ಕರಪತ್ರ ವಿತರಣೆ ಮೂಲಕ ಜಾಗೃತಿ ಮೂಡಿಸುವ ಈ ಜಾಥಕ್ಕೆ ಉದ್ಯೋಗ ಖಾತರಿ ಯೋಜನೆಯ ಒಂಬುಡ್ಸ್ಮನ್ ಶೀನ ಶೆಟ್ಟಿ ಚಾಲನೆ ನೀಡಿ ಮತದಾನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ  ತಿಲಕ್ ಕುಮಾರ್, ಕಾರ್ಯದರ್ಶಿ ನಳಿನಿ, ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕರು ಕೃಷ್ಣ ಮೂಲ್ಯ, ಆದಿವಾಸಿ ಮುಖಂಡರಾದ ಲೀಲಾ, ಭಾಗಿ, ಮಾದರಿ ಗ್ರಾಮ ವಿಕಾಸ ಕೇಂದ್ರದ ಜಯ ಮೊದಲಾದವರು ಭಾಗವಹಿಸಿದ್ದರು. ಲಾವಣ್ಯ, ಚಂಚಲ ಮತ್ತು ಸದಾನಂದ ಕಾರ್ಯಕ್ರಮವನ್ನು ಸಂಯೋಜಿಸಿದರು. 

No comments: